Presenting you the "Nanamana Mandiradi" - Lyrical Video Song.
#Nanamana_Mandiradi | #Satwik_Chakravathy_B_P | #Kaarunya_Sindhu
Song Credits:
Song : Nanamana Mandiradi
Album : Kaarunya Sindhu Vol 3
Singer : Anantharamu
Lyrics : Anantharamu
Music Director : Satwik Chakravathy B. P
Record Lable : Kaarunya Sindhu
Digital Partner : Alpha Digitech
Full Lyrics :
ನನ್ನ ಮನಮಂದಿರದಿ ಹೃದಯ ಕುಂಭವನಿರಿಸಿ
ನಿನ್ನ ಬರುವಿಕೆಗಾಗಿ ಕಾಯುತಿರುವೆ
ನಿನ್ನ ಚರಣವ ಎನ್ನ ಹೃದಯಕಮಲದಿ ಇರಿಸಿ
ಮನದ ಚಂಚಲವನ್ನು ಬಿಡಿಸೊ ಗುರುವೆ || ಪ ||
ತನುವೆಂಬ ಹೂವನ್ನು ಭಕ್ತಿ ಜಲದಿಂ ತೊಳೆದು
ನಿನ್ನ ಪಾದಂಗಳಿಗೆ ಅರ್ಪಿಸಿರುವೆ
ಓ ನನ್ನ ಆತ್ಮವೆ ಅಣುಅಣುವಲೂ ಇರುವೆ
ವಿಶ್ವವ್ಯಾಪಕವಾಗಿ ಬೆಳಗುತಿರುವೆ || 1 ||
ಪಂಚ ಭೂತಗಳೊಡೆಯ ಅರ್ಪಿಸಿಹೆ ಈ ಕಾಯ
ಸತ್ ಚಿತ್ ಆನಂದವನು ನೀಡು ಗುರುವೆ
ಅಂತರಂಗದಿ ನಿಂದು ಜ್ಞಾನ ಜ್ಯೋತಿಯ ಬೆಳಗಿ
ನಿನ್ನ ನಿಜ ರೂಪವನು ತೋರೋ ಪ್ರಭುವೆ || 2 ||
ಎನ್ನ ಉಸಿರುಸಿರಿನಲಿ ನಿನ್ನ ನಾಮವ ಬೆರಸಿ
ನಿನ್ನ ಹಸು ಕಂದನನು ಪೊರೆಯೊ ದೊರೆಯೆ
ಗುರುನಾಥನೇ ನಿನ್ನ ಕರುಣೆ ಒಂದೇ ಸಾಕು
ವಿಷಯ ವಾಸನೆಯನ್ನು ಅಳಿಸೊ ಗುರುವೆ || 3 ||
----------------------------------------------------------------------------------------------------------------------------------------
In association with ALPHA DIGITECH : [ Ссылка ]
YouTube Channel : [ Ссылка ]
Face book: [ Ссылка ]
Twitter : [ Ссылка ]_
Instagram: [ Ссылка ]
LinkedIn: [ Ссылка ]
Ещё видео!