#Gaya,#BudhGaya,#BodhGaya,#ಗಯಾ,#ಬೌದ್ಧ ಗಯಾ,#ಪರಿಚಯ#VishnuPada
Vishnupad Temple is one of the ancient and most famous Hindu temples dedicated to Lord Vishnu.The temple is located in Gaya, Bihar, India on the bank of the river Phalgu, marked by a footprint of Lord Vishnu known as Dharmasila, incised into a block of basalt.
The Vishnupad temple is the center for Shraddha rites in Gaya.
ಗಯಾ ( ಕನ್ನಡದಲ್ಲಿ ಗಯೆ ) ಬಿಹಾರದ ರಾಜಧಾನಿ ಪಾಟ್ನಾದಿಂದ ೧೦೦ ಕಿ.ಮೀ. ದಕ್ಷಿಣದಲ್ಲಿ ಫಲ್ಗೂ ನದಿಯ ತೀರದಲ್ಲಿರುವ ಒಂದು ನಗರ. ಫಲ್ಗೂ ನದಿಯನ್ನು ರಾಮಾಯಣದಲ್ಲಿ ನಿರಂಜನಾ ಎಂದು ಉಲ್ಲೇಖಿಸಲಾಗಿದೆ. ಗಯಾ ಕ್ಷೇತ್ರವು ಹಿಂದೂ ಮತ್ತು ಬೌದ್ಧಧರ್ಮಗಳೆರಡರಲ್ಲೂ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿದೆ.
ಹಿಂದೂ ಪುರಾಣಗಳ ಪ್ರಕಾರ ಈ ಸ್ಥಳದಲ್ಲಿ ಮಹಾವಿಷ್ಣುವು ಗಯಾಸುರನೆಂಬ ಅಸುರನನ್ನು ಸಂಹರಿಸಿದನು. ಈ ಅಸುರನ ಹೆಸರೇ ನಗರಕ್ಕೂ ಅಂಟಿತು. ವಿಷ್ಣುವು ಗಯಾಸುರನನ್ನು ತನ್ನ ಪಾದಗಳಿಂದ ಒತ್ತಿಹಿಡಿವ ಮೂಲಕ ಸಂಹರಿಸಿದನು. ಗಯಾಸುರನು ಸಣ್ಣಸಣ್ಣ ಬೆಟ್ಟಗುಡ್ಡಗಳಾಗಿ ಪರಿವರ್ತಿತನಾದನು. ಗಯಾಸುರನು ಮಹಾ ಮಹಿಮಾವಂತನಾಗಿದ್ದು ತನ್ನನ್ನು ಸ್ಪರ್ಶಿಸುವವರ ಅಥವಾ ನೋಡುವವರ ಪಾಪಗಳೆಲ್ಲವನ್ನು ಕಳೆಯಬಲ್ಲವನಾಗಿದ್ದನು. ದೇವತೆಗಳು ಗಯಾಸುರನ ಮರಣದ ನಂತರ ಆತನ ಕಾಯದಲ್ಲಿ ನೆಲೆಸುವೆವೆಂದು ವಚನವಿತ್ತಿದ್ದರು. ಹೀಗಾಗಿ ಸಾವಿನ ನಂತರ ಈ ಪ್ರದೇಶದಲ್ಲಿ ಬೆಟ್ಟಗುಡ್ಡ ಮತ್ತು ನೆಲದ ರೂಪದಲ್ಲಿ ಉಳಿದಿರುವ ಗಯಾಸುರನ ಕ್ಷೇತ್ರವು ಪರಮ ಪಾವನವಾಗಿ ಸರ್ವ ಪಾಪಗಳನ್ನು ನೀಗಿಸಬಲ್ಲ ಕ್ಷೇತ್ರವಾಯಿತು. ಹಿಂದೂಗಳು ಇಲ್ಲಿ ತಮ್ಮ ಪೂರ್ವಜರಿಗೆ ಶ್ರಾದ್ಧಕಾರ್ಯಗಳನ್ನು ನಡೆಸುವರು. ಇದರಿಂದಾಗಿ ತಮ್ಮ ಪೂರ್ವಜರು ಮಾಡಿರಬಹುದಾದ ಎಲ್ಲ ಪಾಪಗಳು ತೊಳೆದುಹೋಗಿ ಅವರಿಗೆ ಮುಕ್ತಿ ಸಿಗುವುದೆಂಬ ನಂಬಿಕೆ ಇದೆ.
![](https://i.ytimg.com/vi/T_chjehQhZU/mqdefault.jpg)