ಯಕ್ಷರತ್ನ, ಬಡಗುತಿಟ್ಟು ಯಕ್ಷಗಾನದ ಮೇರು ಕಲಾವಿದ, ಅಭಿನವ ಶನೀಶ್ವರ ಖ್ಯಾತಿಯ, ಜಲವಳ್ಳಿ ಶೈಲಿಯ ಜನಕ ಜಲವಳ್ಳಿ ವೆಂಕಟೇಶ್ ರಾವ್ (A real Gem, a living legend, originator of Jalavalli style, a great yakshagana artist Jalavalli Venkatesh Rao)
ಯಕ್ಷಗಾನದ ಉಭಯ ತಿಟ್ಟುಗಳಾದ ತೆಂಕುತಿಟ್ಟು ಮತ್ತು ಬಡಗುತಿಟ್ಟುಗಳಲ್ಲಿ ತನ್ನದೇ ಆದ ವೈಶಿಷ್ಟ್ಯಪೂರ್ಣವಾದ ಛಾಪನ್ನು ಮೂಡಿಸಿ ಯಕ್ಷರಂಗದಲ್ಲಿ ಕೀರ್ತಿಯ ಉತ್ತುಂಗತೆಯನ್ನು ಏರಿದ ಅದ್ವಿತೀಯ ಕಲಾವಿದರು ಜಲವಳ್ಳಿ ವೆಂಕಟೇಶ ರಾವ್.
ಉಭಯತಿಟ್ಟುಗಳಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದ ಈ ಅಗ್ರಮಾನ್ಯ ಕಲಾವಿದ ಜಲವಳ್ಳಿ ವೆಂಕಟೇಶ್ ರಾವ್ ಅವರು ಹೊನ್ನಾವರ ತಾಲೂಕಿನ ಜಲವಳ್ಳಿ ಎನ್ನುವ ಪುಟ್ಟ ಗ್ರಾಮದಲ್ಲಿ ಬೊಮ್ಮ ಮಡಿವಾಳ ಶ್ರೀದೇವಿ ದಂಪತಿಗಳಿಗೆ ಪುತ್ರರಾಗಿ 1-11-1933 ರಲ್ಲಿ ಜನಿಸಿದರು.
ಕಡುಬಡತನದ ಕಾರಣದಿಂದ 2 ನೆಯ ತರಗತಿಯವರೆಗೆ ಮಾತ್ರವೇ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿ ಬಳಿಕ ತನ್ನ 16 ನೆಯ ವಯಸ್ಸಿನಲ್ಲಿ ಯಕ್ಷಗಾನ ಕಲಾಲೋಕದೆಡೆಗೆ ನಡೇದರು. ಕುಂದಾಪುರ ಮರವಂತೆಯ ರಾಮನಾಗಪ್ಪ ಎನ್ನುವವರ ಭಾಗವತಿಕೆ ಮತ್ತು ಅರ್ಥಗಾರಿಕೆ ಇವರಿಗೆ ಯಕ್ಷಗಾನ ರಂಗಭೂಮಿಯೆಡೆಗೆ ಆಕರ್ಷಿತಗೊಳ್ಳಲು ಪ್ರೇರಣೆಯಾಯಿತು. ಹಡಿನಬಾಳ ಸತ್ಯನಾರಾಯಣ ಹೆಗಡೆಯವರು ಜಲವಳ್ಳಿಯವರನ್ನು ಗುಂಡಬಾಳ ಮೇಳಕ್ಕೆ ಸೇರಿಸಿದರು.
ದೈವದತ್ತವಾದ ಪ್ರತಿಭೆಯನ್ನು ಅವಿರತ ಸಾಧನೆಯ ಮುಖೇನ ಮತ್ತಷ್ಟು ಪ್ರಖರಗೊಳಿಸಿದ ಜಲವಳ್ಳಿಯವರು ಯಕ್ಷಗಾನ ರಂಗದಲ್ಲಿ ತನ್ನ ಅಭೂತಪೂರ್ವ ಕಲಾವಂತಿಕೆಯಿಂದ ಮೇರು ಕಲಾವಿದರಾಗಿ ಅಪಾರವಾದ ಜನಮನ್ನಣೆಯನ್ನು ಗಳಿಸಿಕೊಂಡರು.
ಒಟ್ಟಾರೆ 64 ವರ್ಷಗಳ ಸುಧೀರ್ಘ ಸಾರ್ಥಕ ರಂಗಯಾತ್ರೆ ಜಲವಳ್ಳಿಯವರದ್ದು. ಗುಂಡಬಾಳ ಮೇಳದಲ್ಲಿ 10 ವರ್ಷಗಳು, ಇಡಗುಂಜಿ ಮೇಳದಲ್ಲಿ 2 ವರ್ಷಗಳು, ಕೊಂಡದಕುಳಿ ಮೇಳದಲ್ಲಿ 2 ವರ್ಷಗಳು, ಕೊಳಗಿಬೀಸ್ ಮೇಳದಲ್ಲಿ 2 ವರ್ಷಗಳು, ಸುರತ್ಕಲ್ ಮೇಳದಲ್ಲಿ 4 ವರ್ಷಗಳು, ಸಾಲಿಗ್ರಾಮ ಮೇಳದಲ್ಲಿ 24 ವರ್ಷಗಳು, ಪೆರ್ಡೂರು ಮೇಳದಲ್ಲಿ 6 ವರ್ಷಗಳು, ಕಮಲಶಿಲೆ ಮತ್ತು ಗೋಳಿಗರಡಿ ಮೇಳಗಳಲ್ಲಿ ತಲಾ 1 ವರ್ಷ, ಅಮೃತೇಶ್ವರಿ ಮೇಳದಲ್ಲಿ 2 ವರ್ಷಗಳು ಯಕ್ಷಗಾನ ಮೇಳ ತಿರುಗಾಟ ಮಾಡಿದ ಅಗಾಧ ಅನುಭವ ಜಲವಳ್ಳಿಯವರದ್ದು.
ಯಕ್ಷಗಾನದ ಅಭಿಮಾನಿಯಾದ ಹಾಗೂ ಜಲವಳ್ಳಿ ವೆಂಕಟೇಶ್ ರಾವ್ ಅವರ ಅಭಿಮಾನಿಯಾಗಿರುವ ನಾನು ನನ್ನ ಅಭಿನಂದನೆಯನ್ನು ಈ ಡಾಕ್ಯುಮೆಂಟರಿಯ ಮೂಲಕ ಸಲ್ಲಿಸುತ್ತಿದ್ದೇನೆ.
ಈ ಸಾಕ್ಷ್ಯಚಿತ್ರದಲ್ಲಿ ಜಲವಳ್ಳಿ ವೆಂಕಟೇಶ್ ರಾವ್ ಅವರು ಭಾಗವಹಿಸಿರುವ ಶಿಳ್ಗೆ ಎಲೆಕ್ಟ್ರೋನಿಕ್ಸ್ ಸಂಸ್ಥೆಯವರು ಬಿಡುಗಡೆಗೊಳಿಸಿದ್ದ ಗಧಾಯುದ್ಧ ಪ್ರಸಂಗದ ಸಂಪೂರ್ಣ ವೀಡಿಯೋವನ್ನು ಅಳವದಿಸಿಕೊಂಡಿರುತ್ತೇನೆ. ದಾಖಲೆಯ ದೃಷ್ಟಿಯಿಂದ ಶಿಳ್ಗೆ ಎಲೆಕ್ಟ್ರೋನಿಕ್ಸ್ ಸಂಸ್ಥೆಯವರು ಬಿಡುಗಡೆಗೊಳಿಸಿದ್ದ ಈ ವೀಡಿಯೋ ಅತಿ ಮಹತ್ವವುಳ್ಳದ್ದಾಗಿದೆ. ಯಾವುದೇ ವಾಣಿಜ್ಯ ಉದ್ದೇಶವಿರದ ಕಾರಣ ಈ ಸಂದರ್ಶನದ ಸಾಕ್ಷ್ಯಚಿತ್ರದಲ್ಲಿ ಈ ಗಧಾಯುದ್ಧದ ವೀಡಿಯೋವನ್ನು ಅಳವಡಿಸಿಕೊಂಡಿದ್ದೇನೆ. ಶಿಳ್ಗೆ ಎಲೆಕ್ಟ್ರೋನಿಕ್ಸ್ ಸಂಸ್ಥೆಗೆ ಹೃದ್ಯ ಧನ್ಯವಾದಗಳು.
ಬಲು ತಾಳ್ಮೆವಹಿಸಿ ಇದನ್ನು ಮಾಡಿದ್ದೇನೆ. ಈ ಡಾಕ್ಯುಮೆಂಟರಿಯನ್ನು ನೋಡಲೂ ಸಹ ಬಹಳ ಸಮಯದ ಅನುಕೂಲ್ಯತೆಯೂ ಮತ್ತು ತಾಳ್ಮೆಯ ಆವಶ್ಯಕತೆಯೂ ಇದೆ. ಆದರೆ ಇದನ್ನು ಸಂಪೂರ್ಣ ನೋಡಿದ ಕಲಾಭಿಮಾನಿಗಳಿಗೆ ನಿಜಕ್ಕೂ ಸಂತೋಷವಾದೀತು ಎಂಬ ವಿಶ್ವಾಸವುಳ್ಳವನಾಗಿದ್ದೇನೆ.
ವೃತ್ತಿಪರನಲ್ಲ ನಾನು. ನನ್ನ ಸೀಮಿತ ತಿಳುವಳಿಕೆ, ಜ್ಞಾನ, ಮತ್ತು ಸೀಮಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಡಾಕ್ಯುಮೆಂಟರಿ ಮಾಡಿದ್ದೇನೆ. ದೋಷಗಳಿದ್ದರೂ ಕಲಾಭಿಮಾನಿಗಳು ವಿಶಾಲ ಮನಸ್ಸಿನಿಂದ ಸ್ವೀಕರಿಸುವಿರೆಂಬ ಆಶಯದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
_____________________________________________________
I hereby declare that, the content is in the public domain OR is not eligible for copyright protection.
I swear, under penalty of perjury, that I have a good faith belief that the material does not fall under copyright protection.
I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.
Ещё видео!