ಜೋನಿ ಬೆಲ್ಲ:
ಗ್ರಾಮೀಣ ಪ್ರದೇಶದಲ್ಲಿ ಕಬ್ಬುಗಳನ್ನು ಬೆಳೆದ ರೈತರು ಆಲೆಮನೆಗಳಲ್ಲಿ ಬೆಲ್ಲ ತಯಾರಿಸುತ್ತಾರೆ. ಮಲೆನಾಡ ಮಣ್ಣಿನ ಗುಣದ ಕಾರಣ ಜೋನಿಬೆಲ್ಲ ಅತಿ ಸಿಹಿ ಮತ್ತು ಶುದ್ಧ ಜೇನು ತುಪ್ಪದ ಬಣ್ಣದಿಂದ ಕೂಡಿರುತ್ತದೆ. ನೀರು ಬೆಲ್ಲ, ಜೋನಿ ಬೆಲ್ಲ ಎಂದು ಕರೆಯುವ ಇದನ್ನು ದೋಸೆ, ಇಡ್ಲಿ, ಚಪಾತಿಯೊಂದಿಗೆ ತಿನ್ನಲು ಬಳಸುತ್ತಾರೆ. ಕಬ್ಬಿಣದಂಶ ದಟ್ಟವಾಗಿರುವ ಇಂತಹ ಬೆಲ್ಲವನ್ನು ವಿಶೇಷ ಮುತುವರ್ಜಿಯಿಂದ ತಯಾರಿಸಲಾಗುತ್ತದೆ. ಯಾವ ರಾಸಾಯನಿಕದ ಕಲಬೆರಕೆಯೂ ಇಲ್ಲದ, ಹಳ್ಳಿಗಳ ಜನರ ಜೀವನದ ಭಾಗವಾಗಿರುವ ಇದು ಗ್ರಾಮೀಣರ ಜೇನುತುಪ್ಪ ಎನ್ನುವ ಮಾತಿನಲ್ಲಿ ಅತಿಶಯೋಕ್ತಿ ಇಲ್ಲ. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಸಿದ ಕಬ್ಬಿನಿಂದಲೇ ಜೋನಿಬೆಲ್ಲವನ್ನು ತಯಾರಿಸಲಾಗುತ್ತದೆ.
ಹಿಂದೆ ಕೋಣನಿಂದ ಗಾಣ ತಿರುಗಿಸಿ ಕಬ್ಬನ್ನು ಹಿಂಡಿ ಬೆಲ್ಲ ತಯಾರಿಸಲಾಗುತ್ತಿತ್ತು. ಆಗ ಪ್ರತಿ ಕುಟುಂಬದವರೂ ತಮ್ಮ ಮನೆಯ ವ್ಯಾಪ್ತಿಯಲ್ಲಿ ಆಲೆ ಮನೆ ನಡೆಸಿ ಬಂಧುಗಳು ಮತ್ತು ನೆಂಟರಿಷ್ಟರನ್ನು ಕರೆದು ಸಂಭ್ರಮಿಸುತ್ತಿದ್ದರು.
8-10 ವರ್ಷಗಳ ಹಿಂದಿನವರೆಗೂ ಮಣ್ಣಿನ ಗಡಿಗೆ, ತಗಡಿನ ಡಬ್ಬಗಳಲ್ಲಿ ಜೋನಿ ಬೆಲ್ಲ ತುಂಬುತ್ತಿದ್ದ ಮಲೆನಾಡಿನ ರೈತರು ಈಗ ಪ್ಲಾಸ್ಟಿಕ್ ಕ್ಯಾನ್ಗಳಲ್ಲಿ ಸಂಗ್ರಹಿಸಿಡುತ್ತಾರೆ.
ಆಲೆಮನೆ ಮಾಲಿಕರು : ನರಸಿಂಹಮೂರ್ತಿ ಕೆ ಜಿ (ಬಂಡಿಗಡಿ)
- ಸೌಜಿತ್ ಕುಡಿನಲ್ಲಿ.
Liquid Jaggery (Joni bella):
Good for health, this liquid jaggery has the consistency of honey. Can be had with chapathi, idli or dosa. High iron content. Prepared with attention to every detail, with absolutely no chemicals added. Mostly used by rural people of malenadu, it is now available widely, popular because of its health benefits. Organically grown and processed in natural environment, which adds to the taste of jaggery.
-Soujith Kudinalli.
![](https://i.ytimg.com/vi/boB4EsImTio/mqdefault.jpg)