🎶Lyrics : Fr. Thomas Pattathilchira Cmf
🎶Kannada Lyrics : Br Dennys George
🎶Music : Fr. Robin Muthumarathi Cmf
🎤Singer : Teena Mary Abraham
*ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ* ‼️
_*ಸುಮಧುರವಾದ ಕ್ರೈಸ್ತ*_
_*ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.*_
#Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong
𝗦𝗼𝗻𝗴 𝗟𝘆𝗿𝗶𝗰𝘀
ಬನ್ನಿರಿ ಜಪ ಮಾಲೆ ರಹಸ್ಯವ ಧ್ಯಾನಿಸಿ ವಿಮಲಾಂಭಿಕೆಯೊಡನೆ ಪ್ರಿಯ ಸುತನ ಸ್ತುತಿಸೋಣ
ಮಂಗಳ ವಾರ್ತೆಯ ಆಲಿಸಿ ಮರಿಯ
ತ್ವರೆಯಾಗಿ ಎಲಿಜಬೇತ್ ಬಳಿ ಬಂದಳು
ವಿಶ್ವ ವಿಮೋಚಕನಿಗೆ ಜನ್ಮನೀಡಿ
ಅರ್ಪಣೆಗೈದಳು ತನುಜನನು
ಕಾಣದೋದ ಕಂದನ ಕಂಡಳಮ್ಮ
ಬನ್ನಿರಿ ಸಂತೋಷದ ರಹಸ್ಯವ ಧ್ಯಾನಿಸಿ ವಿಮಲಾಂಭಿಕೆಯೊಡನೆ ಪ್ರಿಯ ಸುತನ ಸ್ತುತಿಸೋಣ
ಜೋರ್ಡಾನಲಿ ಪ್ರಭು ಯೇಸು ಸ್ನಾನವ ಪಡೆದು
ಕಾನಾದಲಿ ತನ್ನ ಮಹಿಮೆಯ ಬೆಳಗಿ
ಸಾರಿದರೆಲ್ಲಡೆ ಸತ್ಯ ಸುವಾರ್ತೆಯ
ಕಂಗೊಳಿಸಿದರವರು ತಾಬೋರ್ ಗಿರಿಯಲಿ
ಪರಮ ಪ್ರಸಾದದ ಸ್ಥಾಪಿಸಿದರು
ಬನ್ನಿರಿ ಬೆಳಕಿನ ರಹಸ್ಯವ ಧ್ಯಾನಿಸಿ ವಿಮಲಾಂಭಿಕೆಯೊಡನೆ ಪ್ರಿಯ ಸುತನ ಸ್ತುತಿಸೋಣ
ತೋಯಿತು ಗೆತ್ಸೆಮನಿ ರಕ್ತದ ಬೆವರಿಂದ
ಬಹುವಾಗಿ ತಿಂದರು ಚಾವಟಿ ಏಟು
ಮುಳ್ಳಿನ ಕಿರೀಟವ ಶಿರಸೊಳು ಧರಿಸಿ
ನಡೆದರು ಭಾರದ ಶಿಲುಬೆ ಹೊತ್ತು
ಪ್ರಾಣವ ಬೆಲೆತೆತ್ತು ಬಲಿಯಾದರು
ಬನ್ನಿರಿ ದುಃಖದ ರಹಸ್ಯವ ಧ್ಯಾನಿಸಿ ವಿಮಲಾಂಭಿಕೆಯೊಡನೆ ಪ್ರಿಯ ಸುತನ ಸ್ತುತಿಸೋಣ
ಉತ್ಥಾನರಾದರು ಜಯಧ್ವಜ ಹಿಡಿದು
ನಲವತ್ತನೇ ದಿನ ಸ್ಪರ್ಗಕ್ಕೆರಿದರು
ಜಾಲೆಯಾಗಾತ್ಮರು ಇಳಿದರು ನುಡಿದಂತೆ
ಸ್ವರ್ಗ ಸೇರಿದಳು ದೇವಮಾತೆ
ಭೂ ಸ್ವರ್ಗದ ರಾಣಿಯಾದಳಮ್ಮ
ಬನ್ನಿರಿ ಮಹಿಮೆಯ ರಹಸ್ಯವ ಧ್ಯಾನಿಸಿ ವಿಮಲಾಂಭಿಕೆಯೊಡನೆ ಪ್ರಿಯ ಸುತನ ಸ್ತುತಿಸೋಣ
ಬನ್ನಿರಿ ಜಪ ಮಾಲೆ ರಹಸ್ಯವ ಧ್ಯಾನಿಸಿ ವಿಮಲಾಂಭಿಕೆಯೊಡನೆ ಪ್ರಿಯ ಸುತನ ಸ್ತುತಿಸೋಣ
Ещё видео!