ಗೊಮ್ಮಟೇಶ
ಶ್ರೀ ಚೆನ್ನವೀರ ಕಣವಿ
ಮಣ್ಣು ಮೋಹದ ತಿಗುರಿ : ನಟ್ಟನಡುವೆದ್ದ ಗಿರಿ
ಹುಟ್ಟು ಸಾವಿನ ಮೆಟ್ಟಿಲಾಚೆ ನೀಲಿಯ ಡುಬರಿ.
ಜಾರುಬಂಡೆಯ ತುದಿಗೆ ನಿಮಿರಿ ನಿಂತಿಹ ದೊರಿ.
ಬಯಲೆಲ್ಲವೂ ಬಸದಿ, ಕ್ಷಿತಿಜದಂಚನು ತೂರಿ
ಬೆಳಕಿನ ತುತೂರಿ (ಸ್ತಬ್ಧವಿದೆ ಸಮರಭೇರಿ)
ಹಿಡಿದಿಹರೆ ಹಿಡಿತುಂಬ, ಬಿಟ್ಟಿಹರೆ ಜಗತುಂಬ : ಇಂಥ
ಎತ್ತರಕೇರಲಿಹುದೆ ಮಾನವಬಿಂಬ? ಹಂತ
ಹಂತದಲಿ ಅರುಹಂತ ತುಳಿದ ಬೆಂಕಿಯ ದಾರಿ.
ಮಳೆಗೆ ಮೈದೊಳೆದು, ಗಾಳಿಯ ಹೊದೆದು, ಬಯಲಿನಲ್ಲಿ
ಆತ್ಮದೊಳಮುಗುಳ ತೆರೆದು ನಿಂತಿಹ ನಿರಾಲಂಬ
(ನಾಲ್ಕು ಗೋಡೆಯ ನಡುವೆ ಮಡಗಿದೆ ನಮ್ಮ ಜಂಬ)
ತಳಮಳ ಸೋಸಿ ತಿಳಿದ ಬಿಳಿಗೊಳದ ಹಂಸದುಲಿ.
ತ್ಯಾಗ-ಭೋಗದ ಕೈಯ ಚಾಣಕೆಮ್ಮೆದೆ ಬಂಡೆ
ಪೆಣಿಕೆ ಹಾರಿದೆ; ಚಿತ್ತದಿ ಭಗ್ನಮೂರ್ತಿ ಕಂಡೆ.
Gom'maṭēśa
cennavīra kaṇavi
maṇṇu mōhada tiguri: Naṭṭanaḍuvedda giri
huṭṭu sāvina meṭṭilāce nīliya ḍubari.
Jārubaṇḍeya tudige nimiri nintiha dori.
Bayalellavū basadi, kṣitijadan̄canu tūri beḷakina tutūri
(stabdhavide samarabhēri)
hiḍidihare hiḍitumba, biṭṭihare jagatumba:
Intha ettarakēralihude mānavabimba?
Hanta hantadali aruhanta tuḷida beṅkiya dāri.
Maḷege maidoḷedu, gāḷiya hodedu,
bayalinalli ātmadoḷamuguḷa teredu nintiha nirālamba
(nālku gōḍeya naḍuve maḍagide nam'ma jamba)
taḷamaḷa sōsi tiḷida biḷigoḷada hansaduli.
Tyāga-bhōgada kaiya cāṇakem'mede baṇḍe
peṇike hāride; cittadi bhagnamūrti kaṇḍe.
#channaveerakanavi #poetry #jainism
Ещё видео!